Thursday, October 16, 2008

ನೀನಿಲ್ಲದ ಬದುಕಿನಲಿ......


ನೆನಪುಗಳೇ ಹಾಗೆ ಸುಮ್ಮನೆ ಕಾಡುತ್ತವೆ ,ಅವು ಕಪ್ಪು ಬಿಳುಪಾದರು ಆಗಿರಬಹುದು ಬಣ್ಣ ಬಣ್ಣದ್ದಾಗಿರಬಹುದು ,
ಕೆಲವುಮಧುರವಾದ ನೆನಪುಗಳನ್ನು ಹಾಗೆಯೆ ಬೆಚ್ಚಗೆ ಎದೆಯ ಗೂಡಲ್ಲಿ ಬಚ್ಚಿದಬೇಕೆನ್ನಿಸುತ್ತದೆ .
ಮನದಾಳದಲ್ಲಿ ಹೆಜ್ಜೆ ಗುರುತು ಬಿಟ್ಟು ಹೋದ ಆಕೆಯನ್ನು ಹೇಗೆ
ಮರೆಯಲಿ. ನನ್ನ ಪಾಲಿಗೆಂದೆ ಬಿಟ್ಟು ಹೋದದ್ದು ಅದೊಂದೇ ,
ಅದಿನಗಳಲ್ಲಿ ಕಣ್ಣು ತೆವವಾಗುತ್ತಿತ್ತು ಉಮ್ಮಳಿಸಿಬರುತ್ತಿತ್ತು ದುಃಖ ,
ಇಗ ಹಾಗಲ್ಲ ನೋವುಗಳನ್ನು ನುಂಗಿ ನುಂಗಿ ನಾನು ಅವಳಿರುವಿಕೆಯ ಭ್ರಮಿಸಿ ಬದುಕುತ್ತಿದ್ದೇನೆ .ಆ ನೆನಪುಗಳೇ ಜೀವಾಳ .ಬದುಕೇ ಒಂದು ಪ್ರಶ್ನೆ ,ಉತ್ತರವಿಲ್ಲ ಬದುಕಿಗೆ...
ಕಾರಣವಿಲ್ಲ ನೀ ....ದೂರ ಸರಿದಿದ್ದಕ್ಕೆ ಘಾಸಿಗೊಂದಿದ್ದು ನಾನೊಬ್ಬ ಮಾತ್ರ ಅಲ್ಲ ನೂರಾರು ಕೋಟಿ ಜನ ......ಐಶು ....ಅಲ್ಲಲ್ಲ .....ಐಶ್ವರ್ಯ ಬಚ್ಚನ್ .......

Wednesday, October 1, 2008

ಬಾಲ್ಯದ ಆ ದಿನಗಳು.....

ಹೇಗೆ ಮರೆಯಲು ಸಾಧ್ಯ? ಪತಂಗದ ಹುಳುಗಳನ್ನು ಹಿಡಿದು ದಾರಕಟ್ಟಿ ಹಾರಿಸಿಬಿಟ್ಟ ಆದಿನಗಳನ್ನು ,ಸೋಲ್ಳೆಗಾತ್ರದ ಪರಿಗೆ ಹಣ್ಣಿಗಾಗಿ ಹರಸಾಹಸಪಟ್ಟ ,ಮಾವಿನ ಕಾಯಿ ಕದಿಯಲು ಹೋಗಿ ಸಿಕ್ಕಿ ಕೊಂಡು ಯುಧ್ಧ ಕೈದಿಗಳಂತೆ ಕೈಕಟ್ಟಿ ನಿತ್ತಿದ್ದು , ಕಪ್ಪೆ ಓತಿಕ್ಯಾತ ಗಳಿಗೆ ಅಂತ್ಯ ಸಂಸ್ಕಾರ ಮಾಡಿದ್ದು ,ದಸರಾ ರಜೆಗಾಗಿ ಕಾದು ಕುಳಿತದ್ದು,ಬುಗುರಿ ಆಡಿಗುನ್ನ ಹೊಡೆದು ಗೆಳೆಯರ ಬುಗುರಿ ಒಡೆದು ವಿಜಯೋತ್ಸಾಹ ಆಚರಿಸಿದ್ದು ,ಕೀಟಲೆ ಮಾಡಿ ದಿನಗಟ್ಟಲೆ ಒಂಟಿಕಾಲಲ್ಲಿ ನಿತ್ತಿದ್ದು ......ಇದನ್ನೆಲ್ಲ ಹಾಗೆಯೇ ಮೆಲುಕು ಹಾಕದೆ ಇರುವುದಾದರೂ ಹೇಗೆ .....ದಿನದ ಜಂಜಡಗಳ ನಡುವೆ ಹಾಗೆ ಕಳೆದು ಹೋಗಿದೆ ಬದುಕು.............

Monday, September 29, 2008

ಹೀಗೆ ಸಾಗಲಿ......



ಮನದ ಮಧುರ ಭಾವನೆಗಳನ್ನು ,
ಕೈಗೆಟುಕದ ಆಸೆಗಳನ್ನು ,
ಪದೇ ಬಿಟ್ಟುಬಿಡದೆ ಕಾಡುವ ನೆನಪುಗಳನ್ನು ,
ಉಮ್ಮಳಿಸಿ ಬರುವ ಅಳುವನ್ನು ,
ಹಾಗೆ ಸುಮ್ಮನೆ ಹರತಬೇಕೆನ್ನಿಸುವ ಕಂತೆ ಪುರಾಣವನ್ನು ,
ಗುನುಗಲೇ ಬೇಕೆನ್ನಿಸುವ ಹಾಡುಗಳನ್ನು ಬಂಧಿಸಿ ,
ಜತನಗೊಳಿಸಿ ಅವುಗಳಿಗೆ ಇ- ಸ್ಪರ್ಶ ನೀಡುತ್ತಿರುವೆ .........
ಮಲೆನಾಡಿನ ಜಿಟಿ ಮಳೆಯ ಹಾಗೆ
ಹಿತ ಅನ್ನಿಸಿದರೆ ಹಿತ ಅನ್ನಿಸದಿದ್ದರೆ ಬರಿ ಮಳೆ ಹನಿ ಮಾತ್ರ
ಹಾಗೇ ಜಾರಿ ಹೋಗುತ್ತವೆ ...........................................

--- ಸುದರ್ಶನ ರಾವ್ ಅಳಗೋದು .